ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ನೈತಿಕತೆ ಉಳಿಸುವ ಯಕ್ಷಗಾನ: ಸ್ವರ ವಲ್ಲಿ ಶ್ರೀ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜುಲೈ 21 , 2013
ಶಿರಸಿ, ಜುಲೈ 21 , 2013

ನೈತಿಕತೆ ಉಳಿಸುವ ಯಕ್ಷಗಾನ: ಸ್ವರ ವಲ್ಲಿ ಶ್ರೀ

ಶಿರಸಿ : ಆಸ್ತಿಕ ಸಮಾಜದ ನೈತಿಕತೆಯನ್ನು ಉಳಿಸುವಲ್ಲಿ ಯಕ್ಷಗಾನ ಪ್ರಮುಖ ಪಾತ್ರ ವಹಿಸುತ್ತಿದೆ. ಸಮಾಜದಲ್ಲಿ ಇಂದು ಅಲ್ಪ ಸ್ವಲ್ಪ ನೈತಿಕತೆ ಉಳಿದಿದಿದ್ದರೆ ಅದಕ್ಕೆ ಪ್ರಮುಖ ಕಾರಣ ಯಕ್ಷಗಾನ ಎಂದು ಸ್ವರ ವಲ್ಲಿ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಎರಡು ದಿನಗಳಿಂದ ನಡೆದ ಯಕ್ಷ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಕರ್ಕಿ ನಾರಾಯಣ ಹಾಸ್ಯಗಾರ ಅವರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಿದ ಶ್ರೀಗಳು, ಸಮಾಜದಲ್ಲಿ ಸತ್‌ಪ್ರಭಾವ ಮೂಡಿಸಿ ಆಸ್ತಿಕತೆಯನ್ನು ಜಾಗೃತಗೊಳಿಸದಿದ್ದರೆ ಯಕ್ಷಗಾನ ಸಾರ್ಥಕತೆ ಪಡೆಯುವುದಿಲ್ಲ ಎಂದು ತಿಳಿಸಿದರು.

ಸಮಾಜದಲ್ಲಿ ದೇವರ ಕುರಿತು ಶ್ರದ್ಧೆ ಕಡಿಮೆಯಾಗುತ್ತಿದೆ. ಸಮಾಜ ಬಾಂಧವರು ಆಸ್ತಿಕತೆಯನ್ನು ಮರೆಯುತ್ತಿದ್ದಾರೆ. ಆಸ್ತಿಕತೆ ಉಳಿದರೆ ಸಮಾಜ ಶಾಂತವಾಗಿರಲು ಸಾಧ್ಯ. ಆಸ್ತಿಕತೆಯೆಂಬುದು ನೈತಿಕತೆಯ ತಾಯಿಬೇರು. ದೇವರನ್ನು ನಂಬುವುದಕ್ಕೆ ನೈತಿಕತೆ ಪ್ರಮುಖ ಮಾರ್ಗ. ನೈತಿಕತೆ ಹಾಗೂ ಆಸ್ತಿಕತೆಗಳು ಒಂದೇ ನಾಣ್ಯದ ಎರಡು ಮುಖಗಳು. ಆಧ್ಯಾತ್ಮಿಕತೆಗೆ ಇವೆರಡೂ ಅತ್ಯಂತ ಹತ್ತಿರದ ಸಂಬಂಧ ಹೊಂದಿವೆ ಎಂದು ಶ್ರೀಗಳು ವಿವರಿಸಿದರು.

ಚರ್ಚೆಯ ಮೂಲಕ ವಿಚಾರ: ಮುಖ್ಯ ಆಶೀರ್ವಚನಕಾರರಾಗಿದ್ದ ಶ್ರೀಕ್ಷೇತ್ರ ಕಟೀಲಿನ ಅರ್ಚಕರಾದ ಹರಿನಾರಾಯಣ ಅಸ್ರಣ ರು ಮಾತನಾಡಿ, 'ಸಂತೋಷ ಒದಗಿಸುವುದಷ್ಟೇ ಭಾರತೀಯ ಕಲೆಯ ಉದ್ದೇಶವಾಗಿರಲಿಲ್ಲ. ಸಮಾಜಕ್ಕೆ ಪೂರಕವಾದ, ಒಳ್ಳೆಯ ಅಂಶಗಳನ್ನು ತಿಳಿಸಿ, ಕೆಟ್ಟ ಅಂಶಗಳನ್ನು ತೊಡೆದು ಹಾಕುವಂತೆ ಮಾಡುವುದು ಭಾರತೀಯ ಕಲೆ, ಕಾವ್ಯದ ಪ್ರಮುಖ ಉದ್ದೇಶವಾಗಿತ್ತು' ಎಂದರು. ಹೆಸರಾಂತ ಅರ್ಥಧಾರಿ ಪ್ರಭಾಕರ ಜೋಶಿ ಮಾತನಾಡಿದರು. ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್. ಸಾಮಗ ಅಧ್ಯಕ್ಷತೆ ವಹಿಸಿದ್ದರು. ಹರಿಕೃಷ ಪುನರೂರು, ಜಿ.ಎಲ್. ಹೆಗಡೆ ಕುಮಟಾ ವೇದಿಕೆಯಲ್ಲಿದ್ದರು.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ